ನಮಸ್ತೆ.
ಬಹಳ ದಿನಗಳಿಂದ ಒಂದು ಕನ್ನಡ blog ಬರೆಯಬೇಕು ಅಂತ ಆಸೆ ಇತ್ತು ಆದರೆ ಬರೆಯೋದಕ್ಕೆ ಸಾಧ್ಯ ಆಗಿರಲಿಲ್ಲ; ಕಾರಣ ಸೋಮಾರಿತನ ಅಥವ ವಿಪರೀತ ಕೆಲಸದ ಒತ್ತಡ ಇರಬಹುದು. Start ಮಾಡಿದ್ದು ಆಯ್ತು ಈಗ ಏನು ಬರೆಯೋದು ಅಂತ ಗೊತ್ತಾಗ್ತಿಲ್ಲ :)
ಸುಮಾರು ಒಂಭತ್ತು ವರ್ಷಗಳ ನಂತರ ಕನ್ನಡದಲ್ಲಿ ಬರೆಯುತಿದ್ದೇನೆ. ಖುಷಿ ಮತ್ತು ಭಯ ಒಮ್ಮೆಲೆ ಆಗ್ತಿದೆ. ಎಲ್ಲಿ ತಪ್ಪು ಬರೆಯುತ್ತೇನೋ ಅಂತ ಭಯ :)
ಏನು ಬರ್ಯೋದು ಅಂತ ಯೋಚನೆ ಮಾಡ್ತಿದ್ದೆ ಆಗ ನನ್ನ ಆತ್ಮೀಯ friend ರಾಜೀವ ನೆನಪಿಗೆ ಬಂದ, ಅವನು gtalk status message ನಲ್ಲಿ ಮುದ್ದಾದ ಹನಿಗವನಗಳನ್ನ ಹಾಕಿದ್ದು ನೆನಪಿಗೆ ಬಂತು. ತಕ್ಷಣ ಮರು ಯೋಚನೆ ಮಾಡದೆ ಅವನನ್ನು ಸಂಪರ್ಕಿಸಿದೆ. ನಿರಾಸೆ ಆಗಲಿಲ್ಲ. ತಾನು ಬಿಡು ಸಮಯದಲ್ಲಿ ಗೀಚಿದ ಒಂದೆರಡು ಪದ್ಯಗಳನ್ನು ನನ್ನ blog ನಲ್ಲಿ publish ಮಾಡಲು ಕೊಟ್ಟ.
ಇಲ್ಲಿದೆ ರಾಜೀವನ ಯೋಚನಾ ಲಹರಿಯಿಂದ ಹರಿದು ಬಂದ ಮುದ್ದಾದ ಹನಿಗವನಗಳು. Thanks ರಾಜೀವ. This man has got some talent !
ವಿರಹವೆಂಬ ಬಿರು ಬಿಸಿಲ ಬೇಗೆಯು ದೂರ ಸರಿದು;
ಮನವೆಂಬ ಬಾನಲಿ ನಿನ್ನ ನೆನಪುಗಳ ಮೋಡ ಕವಿದು;
ಆ ಮೋಡ ಮಳೆಯಾಗಿ ನೂರಾರು ಕನಸುಗಳಾಗಿ ಹರಿದು;
ಹೃದಯವು ಹಾಡಿದೆ ನಿನ್ನನು ನೆನೆಯುತ ನಲಿ ನಲಿದು...
ಹಗಲು ರಾತ್ರಿಗಳು ಸರಿದ ಅರಿವಿಲ್ಲ;
ನೀನಿರದ ಕನಸುಗಳ ಸುಳಿವಿಲ್ಲ;
ನೆನಪುಗಳ ಕಾಟಕೆ ನನ್ನಲಿ ನಗುವಿಲ್ಲ;
ನೀ ಜೊತೆಯಿರದೆ ಈ ಜೀವಕೆ ಅರ್ಥವಿಲ್ಲ...
"ನೀನಿಲ್ಲದೆ ನಾನು ____
ನಿನ್ನಾ ____ ನೆನಪು
____ ಕನಸಲ್ಲಿ ___ ";
ಪದಗಳೇ ತೋಚದೆ ಪೂರ್ಣವಾಗದ ಕವನ;
ನೀನಿಲ್ಲದೆ ಕಲ್ಪಿಸಿಕೊಂಡ ನನ್ನ ಜೀವನ ;
ಎರಡೂ ಅರ್ಥಹೀನ!
ಮೈ ಕೊರೆಯುವ ಚಳಿಯಿರಲು;
ಹಿಮವು ಎಡಬಿಡದೆ ಸುರಿಯುತಿರಲು;
ಅವಳ ನೆನಪುಗಳು ಕಾಡುತಿರಲು;
ಅವಳ ಸನಿಹವನು ಬಯಸುತಿರಲು;
ಮದ್ಯವೇ ಬೇಕಿಲ್ಲ ಅಮಲೇರಲು...
ಇರಲು ನಿನ್ನ ನೆನಪುಗಳ ಹಾವಳಿ ನಿರಂತರ
ನನ್ನಲೇ ಉಳಿದಿವೆ ಕವಿತೆಗಳ ಮಹಾಪೂರ
ಎಲ್ಲವನ್ನು ಗೀಚಿ ನಿನಗೆ ಕಳಿಸುವ ಕಾತರ
ಎಂದಿಗೆ ಕೊನೆ ನನ್ನ ನಿನ್ನಾ ನಡುವಿನ ಈ ಅಂತರ
This comment has been removed by the author.
ReplyDeleteaag baraabar lagi he..hahaha...neen kavi aagidre hinge baritiddeno...ninde feelings ansutte...good job rajeev!:)
ReplyDelete