Another teaser from ರಾಜೀವ! Read on ...
"ನಾನು ನಿನ್ನ ಜಸ್ಟ್ ಫ್ರೆಂಡ್ ಥರ ಟ್ರೀಟ್ ಮಾಡ್ದೆ".
ಸಿಟ್ಟೂ ಬರದೆ, ಅವಳ ಮಾತಿಗೆ ಒಪ್ಪಲೂ ಆಗದೆ ಮುಂದೇನು-ಹೇಳು ಅನ್ನೋ ಪ್ರಶ್ನಾರ್ಥಕ ಚಿನ್ಹೆ ನನ್ನಲ್ಲಿ ಮೂಡಿತ್ತು.
"ನಿಂಗೆ ನನಗಿಂತ ಚೆನ್ನಾಗಿರೋ ಹುಡುಗಿ ಸಿಕ್ತಾಳೆ ಕಣೋ".
ಯಾಕೆ-ಹೀಗೆ-ಈ-ಹುಡ್ಗೀರು ಅನ್ನೋ ಭಾವನೆ ನನ್ನ ಮುಖದಲ್ಲಿ ಇದ್ದದ್ದು ಅವಳು ಗಮನಿಸಲಿಲ್ಲ.
"I have spent quality time with you. I felt very happy in your company".
ಬಾಯಿಪಾಠ ಮಾಡಿದಂತೆ ಮಾತನಾಡುತ್ತಿದ್ದ ಅವಳನ್ನು ತಬ್ಬಿ ತಮಾಷೆ-ಸಾಕು ಎಂದು ಹೇಳಬೇಕೆನ್ನುವ ತವಕ ಹೆಚ್ಚುತ್ತಿತ್ತು.
"ನೀನು ಖುಷಿಯಾಗಿರಲಿ ಅಂತ ನಿನ್ನ ಮೀಟ್ ಮಾಡಿದೆ ಕಣೋ".
ಇದು ಕನಸು ಕಣೋ ಎಂದು ಎಚ್ಚರಿಸಲು ಹೋದ ನನ್ನ ಸುಪ್ತ ಮನಸಿನ ಪ್ರಯತ್ನ ವ್ಯರ್ಥವಾಗಲು ಬಹಳ ಸಮಯ ಹಿಡಿಯಲಿಲ್ಲ.
"ಏನಾದ್ರೂ ಮಾತಾಡೋ...".
ಪ್ರತಿ ಬಾರಿ ಏನಾದರೂ ಮಾತನಾಡಬೇಕು ಎನ್ನುವಷ್ಟರಲ್ಲಿ ಅವಳ ಮುಖ ಎಲ್ಲವನ್ನೂ ಮರೆಸುತ್ತಿತ್ತು.
" ಮುಂದೇನು ??" ಅನ್ನೋ ನನ್ನ ಮುಂದಿನ ಪ್ರಶ್ನೆ ಗೊತ್ತಾದಂತಿತ್ತು ಅವಳಿಗೆ.
"ನನ್ನ ಮದುವೆ ಸೆಟ್ ಆಗೋ ಹಾಗಿದೆ. may be any time".
ಸಾಕು ಮಾಡು ತಮಾಷೆ ಅನ್ನೋ ಮೂರು ಪದ ಕೂಡ ಬಾಯಿಂದ ಹೊರಡಲಿಲ್ಲ.
"ನೀನೂ ಮದುವೆ ಮಾಡ್ಕೊಳೋ".
ಹುಚ್ಚು ಹುಡುಗಿ ಎಂದು ಹೇಳಲು ಹೋದವನಿಗೆ ಹುಚ್ಚು ನನಗೋ ಅವಳಿಗೋ ಅನ್ನೋ ದ್ವಂದ್ವ ಕಾಡತೊಡಗಿತು.
"ಸರಿ. ನಿನ್ನ mood ಯಾಕೋ ಸರಿ ಇದ್ದಂತಿಲ್ಲ. I am leaving".
ನನ್ನ mood ಬದಲಾವಣೆಯ ಸೂಕ್ಷ್ಮವನ್ನು ಅರಿತವಳಿಗೆ ನನ್ನ ಮನಸಿನ ಭಾವನೆಗಳು ಅರ್ಥವಾಗಲಿಲ್ಲವೇ? ಎನ್ನುವ ಪ್ರಶ್ನೆ ಮೂಡಿತು.
ಎರಡು ಕ್ಷಣ ನನ್ನನ್ನೇ ದಿಟ್ಟಿಸಿ ನೋಡಿದಳು. "ಮುಂದಿನ ಭೇಟಿ ಯಾವಾಗ?" ಎಂದು ಕೇಳುವ ಬದಲು ಅವಳನ್ನೇ ನೋಡುತ್ತಾ ನಿಂತೆ.
ತನ್ನ ಸ್ಕೂಟಿ ಮೇಲೆ ಕುಳಿತು ಮತ್ತೊಮ್ಮೆ ಹಿಂತುರುಗಿ ನನ್ನೆಡೆ ನೋಡಿದಳು. ಮಂಕು ಬಡಿದ ನನ್ನ ಬುದ್ದಿಗೆ ಏನು ಮಾಡಬೇಕೆಂದು ತೋಚಲಿಲ್ಲ.
ಎಲ್ಲವೂ ನನ್ನ ಅರಿವಿಗೆ ಬರುವ ಮೊದಲೇ ಎಲ್ಲವೂ ಮುಗಿದು ಅವಳೂ ಸಹ ವಾಹನ ಸಂದಣಿಯಲ್ಲಿ ಮರೆಯಾಗಿದ್ದಳು. ತುಂತುರು ಮಳೆ ಶುರುವಾಗಿತ್ತು.
ಕಣ್ಣ ತುದಿಯಲ್ಲಿ ಹನಿಯಿತ್ತು. ಮಳೆ ಹನಿಯೂ ಅಥವಾ ಕಂಬನಿಯೋ ಎನ್ನುವ ತರ್ಕ ಮಾಡುವ ಗೋಜಿಗೆ ಹೋಗಲಿಲ್ಲ.
ಅಲ್ಲಿಂದ ಹೊರಡಲು ಮನಸಿರಲಿಲ್ಲ. ಅವಳು ನನ್ನ ಕರೆಯನ್ನು ಸ್ವೀಕರಿಸಲಿಲ್ಲ. ನನ್ನ sms ಗಳಿಗೆ ಉತ್ತರ ಬರಲಿಲ್ಲ.
ಹಿಂದಿನ ದಿವಸ ನಾ ಅವಳಿಗೆ ಹೇಳಿದ ಮೂರು ಪದಗಳ ಪ್ರಭಾವದಿಂದ ಇಂದು ನಾನು ಏನೂ ಮಾತನಾಡದ ಸ್ಥಿತಿಗೆ ತಲುಪಿದ್ದೆ.
ಅಂದಿನಿಂದ ಇಂದಿಗೆ ಸುಮಾರು ಐದು ವರ್ಷಗಳೇ ಕಳೆದಿವೆ. ಈ ಘಟನೆ ನೆನಪಾದದ್ದು ಆಕಸ್ಮಿಕವಾಗಿ ಅವಳ profile facebook ನಲ್ಲಿ ನೋಡಿದಾಗ. ಮತ್ತೊಂದು ನನ್ನ ಪಾಲಿಗೆ ಖುಷಿಯ
ವಿಷಯ. "Relationship Status: Single" ಎಂದು ಕಂಡದ್ದು. ಫ್ರೆಂಡ್ request ಕಳುಹಿಸಿ ಮತ್ತೆ ಅವಳ ನೆನಪಿನಲ್ಲೇ ಮುಳುಗಿದೆ ...
- ರಾಜೀವ
ನಾನು, ನನ್ನ ಜೀವನ...
Sunday, 3 October 2010
Sunday, 25 October 2009
ಮೊದಲ ಕನ್ನಡ post
ನಮಸ್ತೆ.
ಬಹಳ ದಿನಗಳಿಂದ ಒಂದು ಕನ್ನಡ blog ಬರೆಯಬೇಕು ಅಂತ ಆಸೆ ಇತ್ತು ಆದರೆ ಬರೆಯೋದಕ್ಕೆ ಸಾಧ್ಯ ಆಗಿರಲಿಲ್ಲ; ಕಾರಣ ಸೋಮಾರಿತನ ಅಥವ ವಿಪರೀತ ಕೆಲಸದ ಒತ್ತಡ ಇರಬಹುದು. Start ಮಾಡಿದ್ದು ಆಯ್ತು ಈಗ ಏನು ಬರೆಯೋದು ಅಂತ ಗೊತ್ತಾಗ್ತಿಲ್ಲ :)
ಸುಮಾರು ಒಂಭತ್ತು ವರ್ಷಗಳ ನಂತರ ಕನ್ನಡದಲ್ಲಿ ಬರೆಯುತಿದ್ದೇನೆ. ಖುಷಿ ಮತ್ತು ಭಯ ಒಮ್ಮೆಲೆ ಆಗ್ತಿದೆ. ಎಲ್ಲಿ ತಪ್ಪು ಬರೆಯುತ್ತೇನೋ ಅಂತ ಭಯ :)
ಏನು ಬರ್ಯೋದು ಅಂತ ಯೋಚನೆ ಮಾಡ್ತಿದ್ದೆ ಆಗ ನನ್ನ ಆತ್ಮೀಯ friend ರಾಜೀವ ನೆನಪಿಗೆ ಬಂದ, ಅವನು gtalk status message ನಲ್ಲಿ ಮುದ್ದಾದ ಹನಿಗವನಗಳನ್ನ ಹಾಕಿದ್ದು ನೆನಪಿಗೆ ಬಂತು. ತಕ್ಷಣ ಮರು ಯೋಚನೆ ಮಾಡದೆ ಅವನನ್ನು ಸಂಪರ್ಕಿಸಿದೆ. ನಿರಾಸೆ ಆಗಲಿಲ್ಲ. ತಾನು ಬಿಡು ಸಮಯದಲ್ಲಿ ಗೀಚಿದ ಒಂದೆರಡು ಪದ್ಯಗಳನ್ನು ನನ್ನ blog ನಲ್ಲಿ publish ಮಾಡಲು ಕೊಟ್ಟ.
ಇಲ್ಲಿದೆ ರಾಜೀವನ ಯೋಚನಾ ಲಹರಿಯಿಂದ ಹರಿದು ಬಂದ ಮುದ್ದಾದ ಹನಿಗವನಗಳು. Thanks ರಾಜೀವ. This man has got some talent !
ವಿರಹವೆಂಬ ಬಿರು ಬಿಸಿಲ ಬೇಗೆಯು ದೂರ ಸರಿದು;
ಮನವೆಂಬ ಬಾನಲಿ ನಿನ್ನ ನೆನಪುಗಳ ಮೋಡ ಕವಿದು;
ಆ ಮೋಡ ಮಳೆಯಾಗಿ ನೂರಾರು ಕನಸುಗಳಾಗಿ ಹರಿದು;
ಹೃದಯವು ಹಾಡಿದೆ ನಿನ್ನನು ನೆನೆಯುತ ನಲಿ ನಲಿದು...
ಹಗಲು ರಾತ್ರಿಗಳು ಸರಿದ ಅರಿವಿಲ್ಲ;
ನೀನಿರದ ಕನಸುಗಳ ಸುಳಿವಿಲ್ಲ;
ನೆನಪುಗಳ ಕಾಟಕೆ ನನ್ನಲಿ ನಗುವಿಲ್ಲ;
ನೀ ಜೊತೆಯಿರದೆ ಈ ಜೀವಕೆ ಅರ್ಥವಿಲ್ಲ...
"ನೀನಿಲ್ಲದೆ ನಾನು ____
ನಿನ್ನಾ ____ ನೆನಪು
____ ಕನಸಲ್ಲಿ ___ ";
ಪದಗಳೇ ತೋಚದೆ ಪೂರ್ಣವಾಗದ ಕವನ;
ನೀನಿಲ್ಲದೆ ಕಲ್ಪಿಸಿಕೊಂಡ ನನ್ನ ಜೀವನ ;
ಎರಡೂ ಅರ್ಥಹೀನ!
ಮೈ ಕೊರೆಯುವ ಚಳಿಯಿರಲು;
ಹಿಮವು ಎಡಬಿಡದೆ ಸುರಿಯುತಿರಲು;
ಅವಳ ನೆನಪುಗಳು ಕಾಡುತಿರಲು;
ಅವಳ ಸನಿಹವನು ಬಯಸುತಿರಲು;
ಮದ್ಯವೇ ಬೇಕಿಲ್ಲ ಅಮಲೇರಲು...
ಇರಲು ನಿನ್ನ ನೆನಪುಗಳ ಹಾವಳಿ ನಿರಂತರ
ನನ್ನಲೇ ಉಳಿದಿವೆ ಕವಿತೆಗಳ ಮಹಾಪೂರ
ಎಲ್ಲವನ್ನು ಗೀಚಿ ನಿನಗೆ ಕಳಿಸುವ ಕಾತರ
ಎಂದಿಗೆ ಕೊನೆ ನನ್ನ ನಿನ್ನಾ ನಡುವಿನ ಈ ಅಂತರ

Subscribe to:
Comments (Atom)